ರಿಯಲ್‌ಸ್ಟಾರ್ ಅಂತ ಉಪ್ಪಿಗೆ ಬಿರುದು ಕೊಟ್ಟ ಸಿನಿಮಾ 'ಉಪೇಂದ್ರ' ರೀ ರಿಲೀಸ್ ಆಗಿದೆ. ಈ ಸಿನಿಮಾ 25 ವರ್ಷಗಳನ್ನು ಪೂರೈಸಿದ ಬೆನ್ನಲ್ಲೇ ಈ ಸಿನಿಮಾವನ್ನು ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಮರು ಬಿಡುಗಡೆ ಮಾಡಿದ್ದಾರೆ. ಹೊಚ್ಚ ಸಿನಿಮಾವನ್ನು ರಿಲೀಸ್ ಮಾಡುವಂತೆಯೇ 'ಉಪೇಂದ್ರ' ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗಿದೆ. ಬೆಳಗ್ಗೆ ಆರು ಗಂಟೆಯಿಂದಲೇ ಬೆಂಗಳೂರಿನ ನರ್ತಕಿ ಹಾಗೂ ವಿರೇಶ್ ಅಂತ ಪ್ರಮುಖ ಚಿತ್ರಮಂದಿರಗಳಲ್ಲಿ ಫ್ಯಾನ್ಸ್ ಹಾಕಲಾಗಿದೆ. 25 ವರ್ಷಗಳ ಬಳಿಕ ಸಿನಿಮಾ ರಿಲೀಸ್ ಆಗುತ್ತಿದ್ದರೂ, ಎರಡೂ ಚಿತ್ರಮಂದಿರಗಳೂ ಹೌಸ್‌ಫುಲ್ ಆಗಿದೆ. ಉಪೇಂದ್ರ ಅಭಿಮಾನಿಗಳು ಕಿಕ್ಕಿರಿದು ಸಿನಿಮಾ ನೋಡಿದ್ದಾರೆ.